ಅಧ್ಯಕ್ಷರ ನುಡಿ
ಮಾನ್ಯರೆ,

Manjunath S ಗೌರವಾನ್ವಿತ ನಮ್ಮ ಉಲುಚುಕಮ್ಮೆ ಬ್ರಾಹ್ಮಣ ಮಹಾ ಸಭೆಯ ಸದಸ್ಯರೆಲ್ಲರಿಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ಈ ಹೊಸ ಸಂವತ್ಸರದಲ್ಲಿ ನೂತನವಾಗಿ ನಮ್ಮ ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ(ರಿ) ಗೆ 2018-21ನೆ ಅವಧಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ತಾವೆಲ್ಲರೂ ಹೃತ್ಪೂರ್ವಕವಾಗಿ ಆಯ್ಕೆ ಮಾಡಿ ಆಶೀರ್ವಾದ ಮಾಡಿರುತ್ತೀರಿ. ತಮಗೆಲ್ಲ ನಾವುಗಳು ಆಭಾರಿಯಾಗಿದ್ದೇವೆ. ಈ ಹಿಂದಿನವರಂತೆಯೇ ನಾನು ಸಹ ಹೆಚ್ಚು ಶ್ರಮ ವಹಿಸಿ ದುಡಿಯುತೇನೆ ಎಂಬ ಅಪಾರವಾದ ಭರವಸೆಯನ್ನು ಇಟ್ಟು ಕಾರ್ಯಕಾರಿ ಸದಸ್ಯರು ನನ್ನನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುವವರೆಲ್ಲರಿಗೂ ಸಹ ನನ್ನ ಮನದಾಳದಿಂದ ವಂದಿಸುವು ಮೂಲಕ ಆಭಾರಿಯಾಗಿದ್ದೇನೆ. ಈ ಸಮಿತಿಯು ಮಹಾಸಭೆಯ ಏಳಿಗೆಗಾಗಿ ಹುಮ್ಮಸ್ಸಿನಿಂದ ಶುಭಾಂರಭವನ್ನು ಆರಂಭಿಸಿರುತ್ತೇವೆ.

ಆರ್ಥಿಕವಾಗಿ ನಮ್ಮ ಸಭೆ ಮುನ್ನಡೆದು ನಮ್ಮ ಸಮಾಜವನ್ನು ಉನ್ನತವಾದ ಸ್ಥಾನಕ್ಕೆ ಏರಿಸಿ ಬೆಳೆಯಬೇಕಾದರೆ ನಮ್ಮ ಉಲುಚುಕಮ್ಮೆ ಬ್ರಾಹ್ಮಣ ಸಮುದಾಯದ ಎಲ್ಲಾರು ತಪ್ಪದೆ ಸಭೆಯ ಸದಸ್ಯರಾಗಿ, ಪುದುವಟ್ಟು ನೀಡುವ ಮೂಲಕ ಹಾಗೂ ಕಟ್ಟಡದ ನಿಧಿಗೆ ಹಣ ನೀಡುವ ಮೂಲಕ ಸಹಕರಿಸಲು ಕೋರುತ್ತಿದ್ದೇನೆ.

ಆರ್ಥಿಕ ಸ್ಥಿತಿಯನ್ನು ಆಧರಿಸಿ ನಮ್ಮ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಸೂಕ್ತವಾದ ಸೌಲಭ್ಯಗಳನ್ನು ಒದಗಿಸಲು ಸಹ ಖಂಡಿತವಾಗಿ ಪ್ರಯತ್ನಿಸುತ್ತೇವೆ. ನಮ್ಮ ವಿದ್ಯಾರ್ಥಿಗಳ ಶ್ರೇಯೋಭಿಲಾಶೆಗೆ ನಾವೆಲ್ಲಾ ಪ್ರಾಮಾಣಿಕವಾಗಿ ಶ್ರಮವಹಿಸುತ್ತೇವೆ ಎಂದು ಮನಸಾರೆ ಹೇಳಲು ಇಚ್ಚಿಸುತ್ತೇನೆ.

ಹೆಚ್ಚುಜನ ಮಹಿಳೆಯರು ನಮ್ಮ ಸಭೆಗೆ ಆಗಮಿಸಿ ಮಹಿಳಾ ವಿಭಾಗಕ್ಕೆ ಸದಸ್ಯರಾಗುವುದರೊಂದಿಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಏರ್ಪಡುಮಾಡಿ ಪ್ರಾಯೋಜಕರನ್ನು ಕರೆತಂದು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ, ಪ್ರಾಯೋಜಕತ್ವದ ಮೂಲಕ ಆಯೋಜಿಸಿಕೊಂಡು ಸಭೆಯ ಘನತೆಯನ್ನು ಬೆಳಗಿಸಲು ಕಳಕಳಿಯ ಮನವಿ.

ನಮ್ಮ ಸಭೆಗಾಗಿ ತಾವು ತಮ್ಮವರನ್ನು ಕರೆತನ್ನಿ, ತಾವು ಮುಂದೆ ಬನ್ನಿ ಒಟ್ಟಿಗೆ ಸೇರಿ ಮಾಡಲು ಬಹಳಷ್ಟು ಕಾರ್ಯಗಳಿವೆ. ಹೊಸ ಯುಗದ ಹೊಸ ಹಾದಿಯನ್ನು ಕಟ್ಟೋಣ, ನಮ್ಮ ಹಿರಿಯರ ಆಶೋತ್ತರಗಳಿಗೆ ಸ್ಪಂದಿಸೋಣ, ಎಲ್ಲರೂ ಸೇರಿ ಶ್ರಮವಹಿಸಿ ಸಭೆಯನ್ನು ಉಳಿಸಿ, ಬೆಳಸೋಣ, ಯುವ ಶಕ್ತಿಯು ಮುನ್ನುಗ್ಗಿ ಮಹಾಸಭೆಗೆ ಹೆಚ್ಚು ಹೆಚ್ಚು ಯುವಕರು ಸದಸ್ಯರಾಗಬೇಕು ಎಂದು ನನ್ನ ಮನವಿ.

ನಮ್ಮ ಮುಂದಿನ ದಿನಗಳಲ್ಲಿ ಬರುವ ವೈಭವದ ಶರನ್ನವರಾತ್ರಿ ವಿಶ್ವ ವಿಖ್ಯಾತ ದಸರಾ ಮತ್ತು ವಿಜಯದಶಮಿ, ಬೆಳಕಿನ ಹಬ್ಬ ದೀಪಾವಳಿಗೆ ಸಮಸ್ತ ಉಲುಚುಕಮ್ಮೆ ಕುಲ ಬಾಂಧವರಿಗೆ ಹಾಗೂ ನಾಡಿನ ಜನತೆಗೆ ತಾಯಿ ಶ್ರೀ ರಾಜ ರಾಜೇಶ್ವರಿ ಹಾಗೂ ಕನ್ನಡ ತಾಯಿ ಭುವನೇಶ್ವರಿ ದೇವಿ ಸದಾ ಆಶೀರ್ವಾದಿಸಲಿ ಎಂದು ಕೇಳಿ ಕೊಳ್ಳುತ್ತೇನೆ.

ಇಂತಿ ತಮ್ಮವನೇ ಆದ,
ಮಂಜುನಾಥ್ ಎಸ್.
ಅಧ್ಯಕ್ಷರು.
  ಕಾರ್ಯದರ್ಶಿಗಳ ವರದಿ
ಆತ್ಮೀಯ ಉಲುಚುಕಮ್ಮೆ ಬಂಧುಗಳೇ,

2018-2021 ನೆಯ ಅವಧಿಗೆ ಉಲುಚುಕಮ್ಮೆ ಬ್ರಾಹ್ಮಣ ಮಹಾ ಸಭೆಗೆ ಚುನಾವಣೆ ನಡೆಯ ಬೇಕಿತ್ತು ಆದರೆ ತಮ್ಮ ದಿಟ್ಟ ನಿರ್ಧಾರದಿಂದ ಮಹಾಸಭೆಗೆ ನಡೆಯ ಬೇಕಿದ್ದ ಚುನಾವಣೆ ರದ್ದಾಗಿ ಎಲ್ಲಾ ಹದಿನೈದು ಜನ ಸದಸ್ಯರನ್ನುಅವಿರೋಧವಾಗಿ ಆಯ್ಕೆ ಮಾಡಿ ತಮ್ಮ ನಿರ್ಧಾರ ಪ್ರಕಟಿಸಿ ಚುನಾವಣೆಗೆ ಆಗ ಬೇಕಿದ್ದ ಖರ್ಚನ್ನು ಉಳಿಸಿದ್ದೀರಿ. ಇದು ನಿಮ್ಮಗಳ ಬೆಂಬಲದಿಂದ ಮಾತ್ರ ಸಾಧ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

29.07.2018 ರಂದು ಚುನಾಯಿತ ಎಲ್ಲ 15 ಜನ ಸದಸ್ಯರ ಸಭೆಯಲ್ಲಿ ನನ್ನ ನ್ನೂ ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಿದ್ದಾರೆ. ಇದಕ್ಕಾಗಿ ನಾನು ಎಲ್ಲ ನೂತನ ಸದಸ್ಯರಿಗೂ ಹಾಗೂ ತಮಗೂ ತುಂಬಾ ಆಭಾರಿಯಾಗಿರುವುದೇ ಅಲ್ಲದೆ ನನಗೆ ವಹಿಸಿರುವ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ಮಾಡಿ ನಿಮ್ಮಲ್ಲರ ಭರವಸೆ ಗಳಿಸಲು ಸರ್ವ ಪ್ರಯತ್ನ ಮಾಡುತ್ತೇನೆ. ಕಾರ್ಯದರ್ಶಿಯವರ ಕೆಲಸದ ಜವಾಬ್ದಾರಿ ಎಷ್ಟಿರುತ್ತದೆ ಎಂದು ನನಗೂ ಕೊಂಚ ಮಟ್ಟಿನ ಅರಿವಿದೆ. ಆದರೂ ನಿಮ್ಮಂತಹ ಹಿರಿಯರ ಅಶೀರ್ವಾದ ದಿಂದ ಸದರಿ ಕೆಲಸದಲ್ಲಿ ನಾನು ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತೇನೆಂಬ ಮಾತನ್ನು ಕೊಡುವ ಮುನ್ನ ನಿಮ್ಮ ಪ್ರೀತಿ, ವಿಶ್ವಾಸ ಹಾಗೂ ಮಾರ್ಗದರ್ಶನ ಮುಖ್ಯ ಎಂಬುದನ್ನು ತಮ್ಮೆಲ್ಲರಿಗೆ ಮತ್ತೊಮ್ಮೆ ತಿಳಿಸುತ್ತಾ ಈ ಪುಟ್ಟ ವರದಿಯನ್ನು ತಮ್ಮ ಮುಂದೆ ಇಟ್ಟು ನಿಮ್ಮ ಅಶೀರ್ವಾದ ನನಗೆ ಶ್ರೀ ರಕ್ಷೆಯಾಗಲಿ ಎಂದು ಹೇಳಿ ಮುಗಿಸುತ್ತಿದ್ದೇನೆ. ತಮಗೆಲ್ಲರಿಗೂ ದಸರಾ ಹಾಗೂ ದೀಪಾವಳಿಯ ಶುಭಾಶಯಗಳು.

ತಮ್ಮವನೇ ಆದ,
ಎನ್.ಎಸ್. ನರಹರಿ ರಾವ್,
ಕಾರ್ಯದರ್ಶಿ