ಪುದುವಟ್ಟು - ಎಂದರೆ ಧರ್ಮ ಕಾರ್ಯಗಳಿಗೆ, ಸಮಾಜ ಮುಖಿ ಕಾರ್ಯಗಳಿಗೆ ಮೀಸಲಿಡುವ ಹಣ.

ತಮ್ಮ ಅಥವಾ ತಮ್ಮವರ ಹುಟ್ಟಿದ ಹಬ್ಬದ ಪ್ರಯುಕ್ತವಾಗಲಿ, ವಿವಾಹ ವಾರ್ಷಿಕೋತ್ಸವದ ಪ್ರಯುಕ್ತವಾಗಲಿ, ತಮ್ಮ ತಂದೆ ತಾಯಿ ಅಥವಾ ತಮ್ಮ ಬಂಧು ಬಳಗದವರ ಹೆಸರಿನಲ್ಲಾಗಲಿ/ ಜ್ಞಾಪಕಾರ್ಥವಾಗಲಿ / ನೆನಪಿನಲ್ಲಿಯಾಗಲಿ (ಶ್ರಾದ್ಧದ ದಿನಗಳಿಗಾಗಲಿ) ಅಥವಾ ಹಬ್ಬ ಹರಿದಿನಗಳ/ ಉತ್ಸವಗಳ ನೆನಪಿನಲ್ಲಾಗಲಿ, ಒಂದು ಬಾರಿ ರೂಪಾಯಿ 6,500/- (ಆರು ಸಾವಿರದ ಐದುನೂರು ರೂಪಾಯಿಗಳನ್ನು) ಕೊಟ್ಟು ನಮ್ಮ ಉಲುಚುಕಮ್ಮೆ ಬ್ರಾಹ್ಮಣ ಮಹಾ ಸಭಾ (ರಿ) ನಲ್ಲಿ ಹೆಸರನ್ನು ನೊಂದಾಯಿಸಿ ಕೊಂಡರೆ, ಅದರಿಂದ ಬರುವ ಬಡ್ಡಿ ಹಣದಿಂದ ನಮ್ಮ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ, ತಾವು ನಿಗದಿ ಪಡಿಸಿದ ದಿನದಂದು (ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ವಾಗಲಿ ಅಥವಾ ಪಂಚಾಗದ ತಿಥಿ ವಾರ ನಕ್ಷತ್ರಗಳ ಪ್ರಕಾರವಾಗಲಿ) ರಾತ್ರಿ 8.00 ಗಂಟೆಗೆ ಭೋಜನ ವ್ಯವಸ್ಥೆಯನ್ನು (ಪುದುವಟ್ಟು) ಮಾಡುವುದು, ಆ ದಿನ ರಾತ್ರಿ 8.00 ಗಂಟೆಗೆ ನಮ್ಮ ವಿದ್ಯಾರ್ಥಿ ನಿಲಯಕ್ಕೆ ಪುದುವಟ್ಟು ನೀಡಿದ ಮಹನೀಯರು ಆಗಮಿಸಿ, ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡು, ಭೋಜನ ಸ್ವೀಕರಿಸಿ, ವಿದ್ಯಾರ್ಥಿಗಳನ್ನು ಹರಸಿ ಆಶೀರ್ವದಿಸಿ ಬಹುದು. ಪುದುವಟ್ಟು ಕೊಡಲು ಯಾವುದೇ ಜಾತಿ ಅಥವಾ ಧರ್ಮದ ನಿರ್ಬಂಧವಿರುವುದಿಲ್ಲ. ಕೊಟ್ಟ ಹಣಕ್ಕೆ ತಕ್ಷಣ ರಸೀತಿಯನ್ನೂ ಕಾರ್ಯಾಲಯದಿಂದ ತತ್ ಕ್ಷಣ ಪಡೆದುಕೊಳ್ಳಬಹುದು. ಹಣವನ್ನು RTGS/NEFT ಮುಖಾಂತರವೂ ಸಂದಾಯ ಮಾಡಬಹುದು.

ಬ್ಯಾಂಕಿನ ವಿವರ ಕೆಳಕಂಡಂತಿದೆ :-
Name : Uluchukamme Brahmana MahaSabha,
Bank : State Bank of India, Wilson Garden Branch,
A/C No. 54016693359,
IFSC code: SBIN0004932,
MICR NO. -560002054